Sign up | Login | Font Help

"ಸ್ವಲ್ಪ ಬೇಜಾರಾಗುತ್ತೆ" - ಆಚಾರ್ಯ

"ಸ್ವಲ್ಪ ಬೇಜಾರಾಗುತ್ತೆ" - ಆಚಾರ್ಯ


By vvdooshaka - Posted on 23 September 2008

ಗೃಹ ಸಚಿವ ಡಾ.ವಿ.ಎಸ್.ಆಚಾ

ಬೆಂಗಳೂರು ಸೆ. ೩೧: ಸಚಿವ ಸಂಪುಟದ ಸಹೋದ್ಯೋಗಿಗಳು "ಹೋಂ ಮಿನಿಸ್ಟರ್, ಹೋ ಮಿನಿಸ್ಟರ್" ಎಂದು ಕೀಟಲೆ ಮಾಡಿದಾಗ ಕೊಂಚ ಮಟ್ಟಿಗೆ ಬೇಜಾರಾಗುತ್ತದೆ ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ  ಒಪ್ಪಿಕೊಂಡಿದ್ದಾರೆ.

"ಹೆಂಡತಿ ಅಥವಾ ಗೃಹಿಣಿಗೆ ಹೋಮ್ ಮಿನಿಸ್ಟರ್ ಎಂದು ಹಾಸ್ಯ ಮಾಡುವ ವಾಡಿಕೆ ಇರುವುದು ನನಗೂ ಗೊತ್ತು. ಮೊದ-ಮೊದಲು ಯಾರಾದರೂ ಹೋಂ ಮಿನಿಸ್ಟರ್ ಎಂದು ಕರೆದಾಗ ತುಂಬಾನೇ ಕೋಪ ಬರ್ತಾ ಇತ್ತು. ಈಗ ಅಂತಹ ಕೀಟಲೆಗೆ ಒಗ್ಗಿ ಹೋಗಿದ್ದೇನೆ. ಆದರೂ ಒಮ್ಮೊಮ್ಮೆ ಬೇಸರವಾಗುತ್ತದೆ. ಹಾಗೆಂದ ಮಾತ್ರಕ್ಕೆ ನಾನು ಕೆಲಸ ಮಾಡಲ್ಲ ಅಂತ ಅಲ್ಲ" ಎಂದಿರುವ ಗೃಹ ಸಚಿವರು, "ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟಲು ನಾನು ಪೂರ್ಣ ತಯಾರಿ ನಡೆಸುತ್ತಿದ್ದೇನೆ. ಕೆಲವರು ಈ ಹಲ್ಲೆಯ ಹಿಂದೆ ಮತಾಂಧತೆಯ ಭೂತ ಅಡಗಿದೆ ಎನ್ನುತ್ತಿದ್ದಾರೆ. ಅದೇನಾದರೂ ನಿಜವೇ ಆದಲ್ಲಿ, ಸಿ.ಎಂ. ಒಪ್ಪಿಗೆ ಪಡೆದು, ಕೇರಳದಿಂದ ಮಲಯಾಳಿ ಮಂತ್ರವಾದಿಗಳನ್ನು ಕರೆಸಲೂ ನಾನು ಹಿಂಜರಿಯುವುದಿಲ್ಲ." ಎಂದು ಆಶ್ವಾಸನೆ ನೀಡಿದ್ದಾರೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
1 + 11 =
Solve this simple math problem and enter the result. E.g. for 1+3, enter 4.