ವಿದೇಶಿ ಸಚಿವರಿಲ್ಲ - ಸಿ.ಎಂ. ಸ್ಪಷ್ಟನೆ
ವಿದೇಶಿ ಸಚಿವರಿಲ್ಲ - ಸಿ.ಎಂ. ಸ್ಪಷ್ಟನೆ
ಬೆಂಗಳೂರು, ಸೆ. ೩೧: ತಮ್ಮ ಸಂಪುಟದಲ್ಲಿ ವಿದೇಶಿ ಸಚಿವರ ನೇಮಕಾತಿಯನ್ನು ಮುಖ್ಯ ಮಂತ್ರಿ ಯೆಡ್ಯೂರಪ್ಪನವರು ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ.
ಕಳೆದೆರಡು ದಿನಗಳಿಂದ ವಿಧಾನ ಸೌಧದ ಮುಂಭಾಗದಲ್ಲಿ ಅಮೆರಿಕದ ಇಲಿನಾಯ್ ರಾಜ್ಯದ ವಿರೋಧಿ ಶಾಸಕರೊಬ್ಬರು ಸಚಿವ ಪದವಿಯ ನಡೆಸುತ್ತಿರುವುದರ ಬಗೆಗೆ ಸ್ಪಷ್ಟನೆ ನೀಡಿದ ಮುಖ್ಯ ಮಂತ್ರಿಗಳು, "ಇದು ಕೇವಲ ಕಮ್ಯೂನಿಕೇಷನ್ ಪ್ರಾಬ್ಲಂನಿಂದಾದ ಮಿಸ್‌ಅಂಡರ್‌ಸ್ಟಾಂಡಿಗ್ ಅಷ್ಟೇ. ಅಕ್ಕ ಸಮ್ಮೇಳನಕ್ಕೆ ಹೋದಾಗ, ಷಿಕಾಗೋದಲ್ಲಿ ಇಲಿನಾಯ್ ರಾಜ್ಯದ ಶಾಸಕರನ್ನು ಭೇಟಿ ಮಾಡಿದ್ದು ನಿಜ. ಆದರೆ, ಯಾರಿಗೂ ಮಂತ್ರಿ ಪದವಿ ನೀಡುವ ಆಶ್ವಾಸನೆ ನೀಡಿಲ್ಲ" ಎಂದಿದ್ದಾರೆ.
ಅಭ್ಯಾಸ ಬಲ: ಈ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳ ಸಮೀಪವರ್ತಿಗಳಲ್ಲೊಬ್ಬರು, "ಇದು ಕೇವಲ ಅಭ್ಯಾಸ ಬಲದಿಂದ ಆದ ಪ್ರಮಾದ ಅಷ್ಟೇ. ವಿದೇಶಿ ಸಚಿವರನ್ನು ಕರೆತರುವ ಯಾವುದೇ ಆಲೋಚನೆ ಮುಖ್ಯ ಮಂತ್ರಿಗಳಿಗೆ ಇಲ್ಲ. ಅಕ್ಕ ಸಮ್ಮೇಳನದಲ್ಲಿ ಇಲಿನಾಯ್ ಶಾಸಕಾಂಗದ ವಿರೋಧಿ ಬಣದ ಶಾಸಕ ಬೆನ್ ಲಿಂಕನ್ನರನ್ನು ಮುಖ್ಯ ಮಂತ್ರಿಗಳು ಭೇಟಿಯಾದಾಗ, ಅಭ್ಯಾಸ ಬಲದಿಂದ, ತಮ್ಮ ಪಕ್ಷಕ್ಕೆ ಸೇರಿದರೆ ಸಚಿವನಾಗಿ ಮಾಡುವ ಆಶ್ವಾಸನೆ ನೀಡಿದರು. ಆದರೆ, ಈ ಲಿಂಕನ್ ಮುಖ್ಯ ಮಂತ್ರಿಗಳ ಮಾತನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬಹುದೆಂದು ಯಾರೂ ಯೋಚಿಸಲಿಲ್ಲ. ಈಗ ಆತನನ್ನು ಹೇಗಾದರೂ ವಾಪಸ್ ಸಾಗಹಾಕ ಬೇಕು. ಇಲ್ಲದಿದ್ದರೆ, ಸಾರಿಗೆ ಸಂಸ್ಥೆಯ ಉಪಾಧ್ಯಕ್ಷನ ಸ್ಥಾನ ಕೊಡಬಹುದು" ಎಂದರು.
- 264 reads
Post new comment