ಸಂಪಾದಕೀಯ
ಸಂಪಾದಕೀಯ
"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!
ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ! ಮುಂದೆ ಓದಿ »
ಮಂಗಗಳೂ ಮನುಷ್ಯರೇ ಅಲ್ಲವೇ?
ಮಜಾವಾಣಿ: ತಮಿಳು ಸಂಚಿಕೆ
ಮಜಾವಾಣಿಗೆ ಪುರಸ್ಕಾರ!
ಬೆಂಗಳೂರು ಫೆಬ್ರುವರಿ ೬, ೨೦೦೬: ಕರ್ನಾಟಕ ಮತ್ತು ತಮಿಳು ನಾಡಿನ ನಡುವಿನ ಕಾವೇರಿ ವಿವಾದದ ನಡುವೆಯೇ, ಕನ್ನಡದ (ಆಗೊಂದು ಈಗೊಂದು) ದಿನಪತ್ರಿಕೆ ಮಜಾವಾಣಿ ಇಡೀ ಒಂದು ಸಂಚಿಕೆಯನ್ನೇ ತಮಿಳು ಲಿಪಿಯಲ್ಲಿ ಪ್ರಕಟಿಸಿ "ತಮಿಳು ಲಿಪಿಯಲ್ಲಿ ಪ್ರಕಟಿಸಿದ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆ" ಎಂಬ ಪುರಸ್ಕಾರಕ್ಕೆ ಪಾತ್ರವಾಗಿದೆ.
ಈ ಕುರಿತು ನಮ್ಮ ಪತ್ರಿಕೆಗೆ ಆತ್ಮ-ಸಂದರ್ಶನ ನೀಡಿದ ಮಜಾವಾಣಿ ಸಂಪಾದಕರು, "ಈ ಗೌರವ ನಮ್ಮ ಪತ್ರಿಕೆಗೆ ಮಾತ್ರ ಸಂದ ಗೌರವ ಅಲ್ಲ, ಇಡೀ ಕನ್ನಡ ಪತ್ರಿಕೋದ್ಯಮಕ್ಕೇ ಸಂದ ಗೌರವ. ಇದು ಅತ್ಯಂತ ಹೆಮ್ಮೆಯ ವಿಷಯ. ತಮಿಳಿನಲ್ಲಿ ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು ಎಂದು ತಮಿಳರಿಗೆ ಶುಭ ಹಾರೈಸಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದೇವೆ" ಎಂದರು. "ಅದಲ್ಲದೆ, ಕನ್ನಡ ಪತ್ರಿಕೋದ್ಯಮದ ಹಿರಿಯಕ್ಕನಾಗಿ, ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾ ಹಾಲು-ಹೆಜ್ಜೆಯನ್ನಿಡುತ್ತಿರುವ ಕನ್ನಡ ಪತ್ರಿಕೋದ್ಯಮ ಹಸುಗೂಸಾದ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ಮುಂದಿನ ಹೆಜ್ಜೆಯನ್ನು ತೋರುವ ಜವಬ್ದಾರಿ ಸಹ ನಮ್ಮ ಪತ್ರಿಕೆಯ ಮೇಲಿದೆ" ಎಂದೂ ಸಹ ನುಡಿದರು. ಮುಂದೆ ಓದಿ »
மஜாவாணி: தமிளினல்லி
கன்னடவெனெ குணிதாடுவுதென்னெதெ!
கன்னடவெனெ கிவி னிமிருவுது!! ಮುಂದೆ ಓದಿ »
ಮಜಾವಾಣಿ: ತಿದ್ದುಪುಡಿ
ಪ್ರಜಾವಾಣಿ ತಿದ್ದುಪಡಿ
ಕನ್ನಡದ ಖ್ಯಾತ ಸುದ್ದಿಪತ್ರಿಕೆ ಪ್ರಜಾವಾಣಿ ಶಿಲ್ಪಾ ಶೆಟ್ಟಿಯವರ ರಿಯಾಲಿಟಿ ಷೋ ಕುರಿತು ಒಂದು ಸಂಪಾದಕೀಯವನ್ನು ಪ್ರಕಟಿಸಿತ್ತು. ಮುದ್ರಣ ದೋಷದಿಂದಾಗಿ ಆ ಸಂಪಾದಕೀಯದಲ್ಲಿ ಹಲವಾರು ತಪ್ಪುಗಳಿದ್ದು ಪ್ರಜಾವಾಣಿ ಪತ್ರಿಕೆ ಓದುಗರ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ ಮರುದಿನ ತಿದ್ದುಪಡಿಯೊಂದನ್ನು ಪ್ರಕಟಿಸಬೇಕಾಯಿತು. ಆದನ್ನು ಯಥಾವತ್ತಾಗಿಡಲಾಗಿದೆ: ಮುಂದೆ ಓದಿ »
ಮಜಾವಾಣಿಗೆ ರಜಾ!
ಮಜಾವಾಣಿ ಪತ್ರಿಕೆಯ ಕಾರ್ಯಾಲಯವನ್ನು ಹದಿನಾರು ವರ್ಷಗಳ ನಂತರ ಅಮೆರಿಕದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕಾರ್ಯ ಚಟುವಟಿಕೆಗಳು ನಾಳೆಯಿಂದ ಪ್ರಾರಂಭವಾಗಲಿವೆ. ಹೀಗಾಗಿ ನಮ್ಮ ಪತ್ರಿಕೆಗೆ ಅನಿರ್ದಿಷ್ಟ ಕಾಲ ರಜೆ ಘೋಷಿಸಬೇಕಾದಂತ ಅನಿವಾರ್ಯತೆ ಎದುರಾಗಿದೆ.
ವಿಶ್ವಾದ್ಯಂತ ಇರುವ ನಮ್ಮ ಮೂರುವರೆ ಮಂದಿ ಓದುಗರು, ಇಲ್ಲಿಯವರೆಗೆ ನಮಗೆ ನೀಡಿರುವ ಪ್ರೋತ್ಸಾಹಕ್ಕೆ ನಾನು ಅವರಿಗೆ ಚಿರ ಋಣಿ. ಈ ಪ್ರೋತ್ಸಾಹ ಮುಂದೆಯೂ ಹೀಗೆಯೆ ಮುಂದುವರೆಸಬೇಕೆಂದು ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ರಾ.ಶಿ.ಯವರು ಕೊರವಂಜಿ ಪತ್ರಿಕೆಯನ್ನು ಮುಚ್ಚುವಾಗ ಹೇಳಿದ್ದರೆನ್ನಲಾದ ಮಾತುಗಳು ನೆನಪಿಗೆ ಬರುತ್ತಿವೆ: "ಹೋಗ್‍ಬರ್ತೀನಿ ಅಂದ್ಯೇನೆ ಕೊರವಂಜೀ..? ನೀನಿದ್ದಿದ್ದಿದ್ದೇ ಗೊತ್ತಾಗ್ಲಿಲ್ವಲ್ಲೇ!" ಈ ಮಾತುಗಳು ಕೊರವಂಜಿಗಿಂತ ಮಜಾವಾಣಿಗೆ ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ.
ಕಳಚಿಕೊಳ್ಳುವ ಮುನ್ನ ಹೇಳಲೇ ಬೇಕಾದ ಮಾತು: ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ "ಹರಿಣಿ"ಯವರ ಚಿತ್ರಗಳು ಈಗ ಇಂಟರ್‍ನೆಟ್‍ನಲ್ಲಿ ಲಭ್ಯ. ಅವುಗಳನ್ನು ನೀವು ಇಲ್ಲಿ ನೋಡಬಹುದು.
ವಂದನೆಗಳೊಂದಿಗೆ,
ಶೇಷಾದ್ರಿ ("ವಿ.ವಿ.") ಮುಂದೆ ಓದಿ »
ವೆಲ್‍ಡನ್ ಯುಕ್ತಾ ಮೂಖಿ!
ಇಂದಿನ ನಮ್ಮ ಬಹುಪಾಲು ಸುದ್ದಿ ಮಾಧ್ಯಮಗಳು ಅಲ್ಪ ಸಂಖ್ಯಾತರ ವಿರೋಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ, ನಮ್ಮ ಸಮಾಜದಲ್ಲಿ ಅಲ್ಪ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು, ಶ್ರೀಮಂತರು, ಗಣ್ಯವ್ಯಕ್ತಿಗಳು ಮಾಡುವ ಭ್ರಷ್ಟಾಚಾರ, ಕೊಲೆ, ವಂಚನೆಗಳಂತಹ ಸಣ್ಣ ಪುಟ್ಟ ವಿಷಯಗಳನ್ನು ಆಗಾಗ್ಗೆ ಪ್ರಥಮ ಪುಟದಲ್ಲಿ ವರದಿಮಾಡುವ ನಮ್ಮ ಮಾಧ್ಯಮಗಳು, ಇದೇ ಅಲ್ಪ ಸಂಖ್ಯಾತರು ಒಳ್ಳೆಯ ಕೆಲಸ ಮಾಡಿದಾಗ "ವೆಲ್‍ಡನ್" ಎಂದು ಒಮ್ಮೆಯೂ ಬೆನ್ನು ತಟ್ಟುವುದಿಲ್ಲ.
ಆದರೆ, ಮಜಾವಾಣಿ ಹಾಗಲ್ಲ. ಈಗಾಗಲೇ ನಮ್ಮ ಪತ್ರಿಕೆ ಧರಂ ಸಿಂಗ್ ಮತ್ತು ಮಹಾರಾಷ್ಟ್ರ ಶಾಸಕರಿಗೆ ವೆಲ್‍ಡನ್ ಎಂದಿದೆ. ಇಂದು ನಮ್ಮಿಂದ "ವೆಲ್‍ಡನ್" ಎನ್ನಿಸಿಕೊಂಡು ಬೆನ್ನು ಮುಟ್ಟಿಸಿಕೊಳ್ಳುವ ಸರದಿ ಚಲನ ಚಿತ್ರ ತಾರೆ, ಮಾಜಿ ವಿಶ್ವ ಸುಂದರಿ ಯುಕ್ತಾ ಮೂಖಿಯದಾಗಿದೆ. ಮುಂದೆ ಓದಿ »
ಈ ದೇಹದಿಂದ ದೂರವಾದೆ ಏಕೆ ಅರಿವೆಯೇ...?
ಈ ಷೋ ನ್ಯಾಯವೇ..?
ವೆಲ್‍ಡನ್ ಮಹಾರಾಷ್ಟ್ರ ಶಾಸಕರೇ!!!
ನಮ್ಮ ಕರ್ನಾಟಕದ ಶಾಸಕರು ನಿಮಿಷಕ್ಕೆ ೩ ರೂ ಕೊಟ್ಟು ಮನೆಯ ಬಾಗಿಲಲ್ಲಿ ಕುಳಿತಿರುವ ಸ್ತ್ರೀಯರ ಚಿತ್ರ ನೋಡುತ್ತಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಆಲೋಚನೆಯಲ್ಲಿದ್ದರೆ, ನಮ್ಮ ಪಕ್ಕದ ಮಹಾರಾಷ್ಟ್ರ ರಾಜ್ಯದ ಶಾಸಕರು ಆಕಸ್ಮಿಕ ವಸ್ತ್ರ-ವಿಸರ್ಜನೆಯಂತಹ ಮಹಾನ್ ಅನಾಹುತದ ಕಡೆಗೆ ಅತೀವ ಗಮನಹರಿಸಿರುವುದು ಅತ್ಯಂತ ಶ್ಲಾಘನೀಯ.
ಮಹರಾಷ್ಟ್ರ ವಿಧಾನಸಭಾ ಸದಸ್ಯರೇ, ವೆಲ್‍ಡನ್. ಮುಂದೆ ಓದಿ »
ವಿ-ಚಿತ್ರಾನ್ನವಾದರೂ ಎದೆಗುಂದದ ಮಜಾವಾಣಿ!

(ಮಹಾ ಪ್ರಧಾನ ವ್ಯವಸ್ಥಾಪಕ ಸಂಪಾದಕನ ಮಾತು)
ಇಂದು ಬೆಳಿಗ್ಗೆ ಎಂದಿನಂತೆ ಮಜಾವಾಣಿ ಸಂಚಿಕೆಯನ್ನು ಕೈಗೆತ್ತಿಕೊಂಡಾಗ ಹಿಟ್ ಕೌಂಟರ್ ಮುಖಕ್ಕೇ ಹೊಡೆದಂತಾಯಿತು. ಒಂದು ನಿಮಿಷ ಸಂಶಯ ಆಯಿತು: ಇದು ಮಜಾವಾಣಿನೋ ಅಥವಾ ನಿಜವಾಗಿಯೂ ಕನ್ನಡವೇ ನಿತ್ಯಾನೋ ಅಂತ.
ನಾನು ನೋಡುತ್ತಿದ್ದಿದ್ದು ಮಜಾವಾಣೀನೇ ಅಂತ ಖಾತ್ರಿಯಾದಮೇಲೆ, ನಮ್ಮಜ್ಜಿಗೆ ಹಲವು ವೀಕೆಂಡುಗಳ ಕಾಲ ಇಂಟರ್‌ನೆಟ್ ಬ್ರೌಸಿಂಗ್ ಹೇಳಿಕೊಟ್ಟು 'ಅಜ್ಜಿ, ಸಮಯ ಸಿಕ್ಕಾಗಲೆಲ್ಲಾ ಮಜಾವಾಣಿಗೆ ಹೋಗಿ ಬ್ರೌಸರ್ ರೆಫ್ರೆಶ್ ಮಾಡಿ' ಅಂತ ಹೇಳಿದ್ದು ನೆನಪಾಗಿ, ವಿಶ್ವಾದ್ಯಂತ ಇರುವ ನಮ್ಮ ಮೂರು ಜನ ಓದುಗರಲ್ಲಿ ಒಬ್ಬರಾದ ನಮ್ಮ ಅಜ್ಜಿಯ ಮೇಲೆ ಅಪಾರ ಅಭಿಮಾನ ಉಂಟಾಗಿ ಅವರಿಗೆ ಫೋನ್ ಮಾಡಿದಾಗ ತಿಳಿದದ್ದು: ೧. ದಟ್ಸ್ ಕನ್ನಡದಲ್ಲಿ ಮಜಾವಾಣಿ ವಿ-ಚಿತ್ರಾನ್ನಾವಗಿದೆ ೨. ಮಜಾವಾಣಿಗೆ ಇರುವವರು ಇಬ್ಬರೇ ಓದುಗರು; ಈಗ ಓದುತ್ತಿರುವ ನೀವು ಮತ್ತು ... ನಾನು. ಮುಂದೆ ಓದಿ »




