Sign up | Login | Font Help

ರಾಜ್ಯ

ರಾಜ್ಯ


ವಿದೇಶಿ ಸಚಿವರಿಲ್ಲ - ಸಿ.ಎಂ. ಸ್ಪಷ್ಟನೆ

ಪ್ರಮಾಣ ವಚನ ಸ್ವೀಕರಿಸಲು ತಾಲೀಮುಬೆಂಗಳೂರು, ಸೆ. ೩೧: ತಮ್ಮ ಸಂಪುಟದಲ್ಲಿ ವಿದೇಶಿ ಸಚಿವರ ನೇಮಕಾತಿಯನ್ನು ಮುಖ್ಯ ಮಂತ್ರಿ ಯೆಡ್ಯೂರಪ್ಪನವರು ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ.  ಮುಂದೆ ಓದಿ »

ನೈತಿಕತೆಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಯೆಡ್ಯೂರಪ್ಪ ಕರೆ

BSY Addresses Conferenceಬೆಂಗಳೂರು, ಜೂನ್ ೩೧: ರಾಜಕಾರಣದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಮುಖ್ಯ ಮಂತ್ರಿ ಯೆಡ್ಯೂರಪ್ಪ ನಾಡಿನ ಹಿರಿಯ ರಾಜಕಾರಣಿಗಳಿಗೆ ಕರೆ ಇತ್ತಿದ್ದಾರೆ.  ಮುಂದೆ ಓದಿ »

ನೈಸರ್ಗಿಕ ಕಾರಣಗಳಿಂದ ರೈತನ ಸಾವು!

ಮು.ಮಂ. ನೆಮ್ಮದಿಯ ನಿಟ್ಟುಸಿರು

ಬೆಂಗಳೂರು, ಸೆಪ್ಟೆಂಬರ್ ೩೧: ಹಲವು ವರ್ಷಗಳ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ರೈತರೊಬ್ಬರು ನೈಸರ್ಗಿಕ ಕಾರಣಗಳಿಂದ ಸಾವಿಗೆ ಈಡಾಗಿರುವುದು ವರದಿಯಾಗಿದೆ.  ಮುಂದೆ ಓದಿ »

ಚುನಾವಾಣಿ '08: ಜನ ವಾಣಿ

[ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ, ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ - ಸಂ.]
 ಮುಂದೆ ಓದಿ »

ಚುನಾವಾಣಿ ೨೦೦೮: ಡೀಲಕ್ಸ್ ಮತಗಟ್ಟೆಗಳಲ್ಲಿ ಉಗುರುಗಳಿಗೆ ಬಣ್ಣ

ದೇಶದಲ್ಲಿಯೇ ಪ್ರಥಮ ಬಾರಿಗೆ ಫೈವ್ ಸ್ಟಾರ್ ಮತಗಟ್ಟೆ!

ಬೆಂಗಳೂರು ಮೇ ೧೨: ಸಿರಿವಂತ ಮತದಾರರನ್ನು ಆಕರ್ಷಿಸಲು ಇದೇ ಪ್ರಥಮ ಬಾರಿಗೆ ಡೀಲಕ್ಸ್ ಮತಗಟ್ಟೆಗಳನ್ನು ಚುನಾವಣ ಆಯೋಗ ಲಭ್ಯಗೊಳಿಸಿದೆ.

ಈ ವಿಷಯದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಕಮೀಷನರ್ ಎನ್.ಗೋಪಾಲಸ್ವಾಮಿಯವರು, ಇಂತಹ ಮತಗಟ್ಟೆಗಳು ಜಗತ್ತಿನಲ್ಲೇ ಪ್ರಥಮಬಾರಿಗೆ ಬೆಂಗಳೂರಿನ ಗಣ್ಯ ಮತದಾರರಿಗೆ ಲಭ್ಯವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.  ಮುಂದೆ ಓದಿ »

ಎಸ್.ಎಂ.ಕೃಷ್ಣ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹ

ಬೆಂಗಳೂರು, ಏಪ್ರಿಲ್ ೧: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಯೋಗವೊಂದು ನಗರದ ಪೋಸ್ಟ್ ಮಾಸ್ಟರ ಜನರಲ್ ಅವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹೃದಯಕ್ಕೆ ಪ್ರತ್ಯೇಕ ಪೋಸ್ಟಲ್ ಕೋಡ್ ನೀಡುವಂತೆ ಆಗ್ರಹಿಸಿತು.  ಮುಂದೆ ಓದಿ »

ಮಜಾವಾಣಿ: ರಾಜಕೀಯ ಸುದ್ದಿ

"ಯಡ್ಡಿಯಿಂದ ಅಂತಹ ತೊಂದರೆ ಏನೂ ಇಲ್ಲ" - ವಿ.ಸೌ. ನೌಕರ

ಬೆಂಗಳೂರು, ಮಾರ್ಚ್ ೨೧: ಮಾಜಿ ಮುಖ್ಯ ಮಂತ್ರಿ ಯೆಡ್ಯೂರಪ್ಪನವರಿಂದ ತಮಗೆ ಅಂತಹ ತೊಂದರೆ ಏನೂ ಆಗುತ್ತಿಲ್ಲವೆಂದು ವಿಧಾನ ಸೌಧ ನೌಕರರು ಹೇಳಿದ್ದಾರೆ.

ಮುಖ್ಯ ಮಂತ್ರಿ ಪದವಿಗೆ ರಾಜಿನಾಮೆ ನೀಡಿದ ನಂತರವೂ ಯೆಡ್ಯೂರಪ್ಪನವರು ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಕಛೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ನೇತಾರರ ಕೆಂಗಣ್ಣಿಗೆ ಕಾರಣವಾಗಿರುವುದು ನಿಜವಾದರೂ, ಕಛೇರಿಯಲ್ಲಿ ಕೆಲಸ ಮಾಡುವವರಿಗಂತೂ ಯಾವುದೇ ರೀತಿಯ ಅಭ್ಯಂತರವಿದ್ದಂತಿಲ್ಲ.

ಈ ವಿಚಾರದ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಗುಮಾಸ್ತೆ ಪರಮೇಶಪ್ಪ, ಯೆಡ್ಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಕಛೇರಿಗೆ ಬರುತ್ತಿರುವುದರಿಂದ ಮೊದ ಮೊದಲು ತಮಗೆ ಕಸಿವಿಸಿಯಾಯಿತೆಂದು ಒಪ್ಪಿಕೊಂಡರಾದರೂ, ಅದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಏನೂ ಆಗಿಲ್ಲ ಎಂದರು.  ಮುಂದೆ ಓದಿ »

"ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸಹೋಗಲು ಸಿದ್ಧ" - ಯಡ್ಡಿ

ಶಿರಾಳ ಕೊಪ್ಪ, ಡಿಸೆಂಬರ್ ೧: ರಾಜ್ಯದ ಜನರ ಹಿತಾಸಕ್ತಿಗಾಗಿ ತಾವು ಮತ್ತೆ ಮತ್ತೆ ಮೋಸಹೋಗಲು ಸಿದ್ಧವಿರುವುದಾಗಿ ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ಘೋಷಿಸಿದ್ದಾರೆ.

ನಗರದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, "ಮೋಸ ಹೋಗುವುದು ನನಗೆ ಹೊಸದೇನೂ ಅಲ್ಲ. ಚಿಕ್ಕಂದಿನಿಂದ ಅದರ ಅನುಭವವಿದೆ. ಶಾಲೆಯಲ್ಲಿದ್ದಾಗ, ಪೆಪ್ಪರ್ ಮಿಂಟ್ ಆಸೆ ತೋರಿಸಿ ನನ್ನಿಂದ ಎಷ್ಟೋ ಜನ ಬಳಪ, ಪೆನ್ಸಿಲ್ ತೆಗೆದುಕೊಳ್ಳುತ್ತಿದ್ದರು. ಅದೂ ಒಂದಲ್ಲ, ಹತ್ತಾರು ಸಾರಿ. ಈಗ ರಾಜ್ಯದ ಜನರ ಹಿತ ರಕ್ಷಣೆಗಾಗಿ ಮುಖ್ಯಮಂತ್ರಿಯ ಪದವಿಯ ಆಸೆ ತೋರಿಸಿದಲ್ಲಿ ಎಂತಹ ಮೋಸ, ವಿಶ್ವಾಸ ದ್ರೋಹಕ್ಕೆ ಒಳಗಾಗಲೂ ನಾನು ಸಿದ್ಧ" ಎಂದರು.  ಮುಂದೆ ಓದಿ »