ತಂತ್ರಜ್ಞಾನ-ವಾಣಿಜ್ಯ
ತಂತ್ರಜ್ಞಾನ-ವಾಣಿಜ್ಯ
ಕ್ರೋಕೋಟಿಯೇ:ಮೊಸಳೆ ಕಣ್ಣೀರು ಮಾರುಕಟ್ಟೆಗೆ!
ಬೆಂಗಳೂರು
ಡಿ.6: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ
ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ
ಮುಖ್ಯಮಂತ್ರಿ ಬಿ.ಎಸ್.ಯೆಡ್ಯೂರಪ್ಪನವರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಮುಂದೆ ಓದಿ »
ಬೂ - ಹೊಸ ಸುಗಂಧ ಮಾರುಕಟ್ಟೆಗೆ
ಬೆಂಗಳೂರು, ಏಪ್ರಿಲ್ ೧: ಸುಪ್ರಸಿದ್ಧ ಫ್ರೆಂಚ್ ಸಂಸ್ಥೆ ಷನೆಲ್ ಸಹಕಾರದೊಂದಿಗೆ ತಯಾರಿಸಿರುವ "ಬೂ" ಎಂಬ ಸುಗಂಧವನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಈ ಸುಗಂಧ ಕನಕಪುರ ಕ್ಷೇತ್ರದ ಅಸಲೀ ಮಣ್ಣಿನಿಂದ ತಯಾರಿಸಲ್ಪಟ್ಟಿದ್ದು ೧೦೦% ನೈಸರ್ಗಿಕವಾಗಿದೆ. ರಾಜಕಾರಣ, ಸಾಹಿತ್ಯ, ರಿಯಲ್ ಎಸ್ಟೇಟ್ ವ್ಯಾಪಾರ, ಚಿತ್ರರಂಗವೂ ಸೇರಿದಂತೆ ಹಲವಾರು ರಂಗಗಳಲ್ಲಿ ಇತ್ತೀಚೆಗೆ ಮಣ್ಣಿನ ವಾಸನೆಗೆ ಅಪಾರ ಬೇಡಿಕೆಯಿದ್ದು, ಈ ಹೊಸ ಸುಗಂಧ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಇವೆ ಎನ್ನಲಾಗಿದೆ. "ಬೂ" ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಯವರು, "ಚುನಾವಣೆ ಸಮಯ ಹತ್ತಿರವಿರುವುದರಿಂದ ಮಣ್ಣಿನ ವಾಸನೆಯ ಅನಿವಾರ್ಯತೆ ಸಹ ಹೆಚ್ಚಾಗಿದೆ. ಸದ್ಯಕ್ಕೆ ಕನಕಪುರದ ಮಣ್ಣಿನ ವಾಸನೆ ಮಾತ್ರ ಬಿಡುಗಡೆ ಮಾಡಿದ್ದು, ಮುಂದೆ ಸಾತನೂರು, ಹಾಸನ, ರಾಮನಗರಗಳ ಮಣ್ಣಿನ ವಾಸನೆಯನ್ನು ಸಹ ಮಾರುಕಟ್ಟೆಗೆ ತರುವ ಆಲೋಚನೆ ಇದೆ" ಎಂದರು. ಮುಂದೆ ಓದಿ »
ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ನಮಗೂ ಪಾಲು ಕೊಡಿ: ಅ.ಭಾ.ಮ.ಪ್ರೀ.ಸಂ.(ಅ.ರಿ.)
ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಲಿಕ ಡಾ|| ವಿಜಯ್ ಮಲ್ಯ ಅವರು ಏರ್ ಡೆಕ್ಕನ್ ಕಂಪನಿಯನ್ನು ಕೊಂಡ ವಿಷಯವನ್ನು ಕೇಳಿದ ಅ.ಭಾ.ಮ.ಪ್ರೀ.ಸಂ.(ಅ.ರಿ.) (ಅಖಿಲ ಭಾರತ ಮದ್ಯಪಾನ ಪ್ರೀಯರ ಸಂಘ. ಅನ್ ರಿಜಿಸ್ಟರ್ಡ್) ದ ಅಧ್ಯಕ್ಷರೂ ಹಾಗೂ ಕುಡಿತವನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಶ್ರೀ ಮಧುಸೇವನ್ ಅವರು ನಿನ್ನೆ ರಾತ್ರಿ ಗಿರಿನಗರದಲ್ಲಿರುವ ಬಾರೊಂದರಲ್ಲಿ ನಡೆದ ಪತ್ರಿಕಾ(ಪಾನ)ಗೋಷ್ಠಿಯಲ್ಲಿ ಈ ಬೇಡಿಕೆಯನ್ನು ಮಂಡಿಸಿದರು. ಮುಂದೆ ಓದಿ »
ಪಾಮ್ ಪ್ರಿಂಟರ್: ಎಚ್.ಪಿ. ಸಂಸ್ಥೆಯ ನೂತನ ಪ್ರಿಂಟರ್ ಸದ್ಯದಲ್ಲೇ ಮಾರುಕಟ್ಟೆಗೆ
ನಿನ್ನೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಎಚ್.ಪಿ. ಸಂಸ್ಥೆಯ ತಂತ್ರಜ್ಞಾನ ಮುಖ್ಯಸ್ಥ ಎರಿಕ್ ವಾನ್ ಡಾನಿಕೆನ್ "ಭಾರತೀಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವಲ್ಲಿ ಈ ಪ್ರಿಂಟರುಗಳು ಮಹತ್ವದ ಪಾತ್ರ ವಹಿಸಲಿವೆ. ಭಾರತೀಯ ಲೇಖಕರು, ಸಾಹಿತಿಗಳು ಈ ಪ್ರಿಂಟರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು" ಎಂದು ಕರೆ ಇತ್ತರು.
"ನಾವು ಪ್ರಪಂಚವನ್ನು ಬಿಸಿ ಮಾಡಿಲ್ಲ" - ಮೂರ್ತಿ, ಪ್ರೇಮ್‌ಜಿ, ಮಿತ್ತಲ್
ಡಾವೋಸ್, ಜನವರಿ ೩೦, ೨೦೦೬: ಗ್ಲೋಬಲ್ ವಾರ್ಮಿಂಗ್ ವಿಷಯದಲ್ಲಿ ತಾವು ತಪ್ಪಿಸ್ಥರಲ್ಲವೆಂದಿರುವ ನಾರಾಯಣ ಮೂರ್ತಿ, ಪ್ರೇಮ್‌ಜಿ ಮತ್ತು ಲಕ್ಷ್ಮಿ ಮಿತ್ತಲ್ ಅವರು, "ನಾವು ಪ್ರಪಂಚವನ್ನು ಬಿಸಿ ಮಾಡಿಯೇ ಇಲ್ಲ" ಎಂದಿದ್ದಾರೆ.
ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾತನಾಡುತ್ತಿದ್ದ ಇವರು, ಮಿತ್ತಲ್ ಅವರ ಮನೆಯಲ್ಲಿ ಒಂದು ಅತ್ಯಾಧುನಿಕ, ಬೃಹತ್ ಒಲೆ ಇರುವುದನ್ನು ಒಪ್ಪಿಕೊಂಡರಾದರೂ, ಅದರಿಂದ ಇಡೀ ಜಗತ್ತಿನ ತಾಪ ಹೆಚ್ಚಾಗುವ ಸಂಭವ ಅತಿ ಕಡಿಮೆ ಎಂದರು. ಮುಂದೆ ಓದಿ »
JPM Pvt Ltdಗೆ ISO 9001 ಮಾನ್ಯತೆ
ಬೆಂಗಳೂರು, ಜೂನ್ ೧೧, ೨೦೦೭: ಬೆಂಗಳೂರಿನ ಜನಶಕ್ತಿ ಪ್ರೊಟೆಸ್ಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (JPM) ಸಂಸ್ಥೆ ಇತ್ತೀಚೆಗೆ ಪ್ರತಿಷ್ಠಿತ ಐ.ಎಸ್.ಓ. ೯೦೦೧ ಸರ್ಟಿಫಿಕೇಟ್ ಪಡೆದಿದೆ. JPM ಸಂಸ್ಥೆಯ ಸಿ.ಇ.ಓ. ನಾಗರಾಜ್ ವಾಟಾಳ್ ಅವರು ಈ ವಿಷಯವನ್ನು ನಮ್ಮ ಪತ್ರಿಕೆಗೆ ತಿಳಿಸಿದರು.
ಪ್ರತಿಭಟನಾ ನಿರ್ವಹಣಾ ಸಂಸ್ಥೆಗಳಲ್ಲಿ ಜೆ.ಎಸ್.ಎಸ್. ಐ.ಎಸ್.ಓ. ೯೦೦೧ ಸರ್‍ಟಿಫಿಕೇಟ್ ಪಡೆದ ಮೊದಲ ಸಂಸ್ಥೆಯಾಗಿದ್ದು ಹಲವು ದಶಕಗಳ ಬಂದ್, ಪ್ರತಿಭಟನೆ, ಪ್ರದರ್ಶನ, ಉಪವಾಸಗಳ ನಿರ್ವಹಣೆಯ ಅನುಭವ ಪಡೆದಿದೆ. ಮುಂದೆ ಓದಿ »
Apple - AOL ಸಹಯೋಗದಲ್ಲಿ iGod ಮಾರುಕಟ್ಟೆಗೆ
ಸ್ಯಾನ್ ಹೋಸೆ (ಕ್ಯಾಲಿಫೋರ್ನಿಯ), ಸೆಪ್ಟೆಂಬರ್ ೧೫, ೨೦೦೬: ಶರವೇಗದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಲು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ (AOL) ಅಮೆರಿಕದ ಪ್ರಖ್ಯಾತ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ತಯಾರಕರಾದ Apple ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಫಲಿತವಾದಲ್ಲಿ ಮುಂದಿನ ಕ್ರಿಸ್‌ಮಸ್ ವೇಳೆಗೆ ಅಮೆರಿಕನ್ ಮಾರುಕಟ್ಟೆಯಲ್ಲಿ iGod ಲಭ್ಯವಾಗಲಿದೆ. ಮುಂದೆ ಓದಿ »



