Sign up | Login | Font Help

ಕ್ರೀಡೆ

ಕ್ರೀಡೆ


ಶಾಸಕರ ಭವನದ ಸಮೀಪ ಡಿಕೆಶಿ'ಸ್ ಕ್ಯಾಸಲ್


(ಮಜಾವಾಣಿ ಎಕ್ಸ್‌ಕ್ಲೂಸಿವ್)

ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು, ಇದಕ್ಕೆ ಡಿಕೆಶಿ'ಸ್ ಕ್ಯಾಸಲ್ ಎಂದು ಹೆಸರಿಡಲಾಗಿದೆ.  ಮುಂದೆ ಓದಿ »

"ನನ್ನ ಬಲಗೈ ಬಗೆಗೆ ನನಗೆ ಬೇಸರವಿಲ್ಲ" - ಯುವಿ


ಜಲಂಧರ್, ನವೆಂಬರ್ ೩೧: ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಬಲಗೈ ಬಗೆಗೆ ತಾವು ಯಾವುದೇ ಮಲತಾಯಿ ಧೋರಣೆ ತೋರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ತಮ್ಮ ಎಡಗೈ ಬ್ಯಾಟಿಂಗ್ ಮತ್ತು ಬೌಲಿಂಗಿನಿಂದ ಕ್ರಿಕೆಟ್ ರಂಗದಲ್ಲಿ ಮಹತ್ತರ ಯಶಸ್ಸನ್ನು ಪಡೆದಿರುವ ಯುವರಾಜ್ ಸಿಂಗ್, ಜಲಂಧರದಲ್ಲಿ ನಡೆಯುತ್ತಿರುವ ಕ್ರೀಡಾ ವರದಿಗಾರರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅನಂತರ ನಡೆದ ಸುದ್ದಿಗೋಷ್ಠಿಯಲ್ಲಿ, ನಮ್ಮ ಪತ್ರಿಕೆಯ ವರದಿಗಾರರ "ನಿಮ್ಮ ಬಲಗೈ ಬಗೆಗೆ ಬೇಸರವಿದೆಯೇ?" ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಿಕೆಟ್ಟಿನಲ್ಲಿ ತಾವು ಕಂಡಿರುವ ಯಶಸ್ಸಿಗೆ ತಮ್ಮ ಎಡಗೈ ಸಾಧನೆಯೇ ಮುಖ್ಯ ಕಾರಣ ಎಂಬುದನ್ನು ಒಪ್ಪಿಕೊಂಡರಾದರೂ, "ನನ್ನ ಬಲಗೈ ಬಗೆಗೆ ನನಗೆ ಯಾವುದೇ ಬೇಸರವಿಲ್ಲ. ನಾನು ಎಡಗೈ ಆಟಗಾರ ನಿಜ. ಆದರೆ, ನನ್ನ ಬಲಗೈ ಬಗೆಗೆ ನನಗೆ ಅಭಿಮಾನವಿಲ್ಲದಿಲ್ಲ" ಎಂದರು.
(ಚಿತ್ರ ಕೃಪೆ: ಹಿಂದು)  ಮುಂದೆ ಓದಿ »