Sign up | Login | Font Help

ಅಗ್ರ-ರಾಷ್ಟ್ರೀಯ-ಸುದ್ದಿ

ಅಗ್ರ-ರಾಷ್ಟ್ರೀಯ-ಸುದ್ದಿ


ಇಸ್ರೋ ಜೊತೆ ಶಬಾನ ಒಪ್ಪಂದ

ಶಬಾನ ಹುಬ್ಬು ಅಂತರಿಕ್ಷಕ್ಕೆ

ಬೆಂಗಳೂರು ನ.೩೧: ಬಾಲಿವುಡ್ಡಿನ
ಪ್ರಖ್ಯಾತ ತಾರೆ ಶಬಾನ ಅಜ್ಮಿಯವರು ಇಂದು ಇಸ್ರೋ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ
ಸಹಿ ಹಾಕಿದರು. ಆ ಒಪ್ಪಂದದ ಪ್ರಕಾರ ಶಬಾನರವರ ಹುಬ್ಬುಗಳನ್ನು ಅಂತರಿಕ್ಷಕ್ಕೇರಿಸುವ
ಹೊಣೆ ಇಸ್ರೋ ಪಾಲಿಗೆ ಒದಗಿದೆ.
 ಮುಂದೆ ಓದಿ »

ಹಗ್ಗಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆ

ಹಗ್ಗ

ನವ ದೆಹಲಿ, ಸೆಪ್ಟೆಂಬರ್ ೩೧: ಹಗ್ಗಗಳ ಅಕ್ರಮ ಬಳಕೆಯಿಂದ ಕೇಂದ್ರ ಸರ್ಕಾರ ರೋಸಿ ಹೋಗಿದ್ದು, ಈ ಅಕ್ರಮ ಬಳಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧವಾಗುತ್ತಿದೆ ಎನ್ನಲಾಗಿದೆ.  ಮುಂದೆ ಓದಿ »

ಇನ್ನು ಮುಂದೆ ಅಣು "ಮುಂಬ್"?!

ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ.  ಮುಂದೆ ಓದಿ »

ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!


ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ.  ಮುಂದೆ ಓದಿ »

ಮಜಾವಾಣಿ ತನಿಖಾ ವರದಿ: ತಮಿಳರ ಕಾವೇರಿ ಆಸೆಯ ಕಾರಣ ಪತ್ತೆ!

ತಲಕಾವೇರಿ, ಏಪ್ರಿಲ್ ೧: ನದಿ ಮೂಲ, ಋಷಿ ಮೂಲ ತಿಳಿಯುವುದು ಹೇಗೆ ಕಷ್ಟವೋ ಹಾಗೆಯೇ ತಮಿಳರ ಕಾವೇರಿ ಮೇಲಿನ ಆಸೆಯ ಮೂಲವನ್ನು ತಿಳಿಯುವುದೂ ಕಷ್ಟ. ತಮಿಳು ನಾಡು-ಕರ್ನಾಟಕದ ನಡುವಿನ ವಿವಾದ ಸುಪ್ರೀಂ ಕೋರ್ಟಿನ ಕಟ್ಟೆ ಹತ್ತಿದ್ದರೂ, ತಮಿಳು ನಾಡಿನವರಿಗೆ ಕಾವೇರಿಯ ಮೇಲೆ ಏಕೆ ಇಷ್ಟೊಂದು ಪ್ರೇಮ ಎನ್ನುವ ಪ್ರಶ್ನೆ ಮಾತ್ರ ಇಂದಿನ ವರೆಗೆ ಪ್ರಶ್ನೆಯಾಗಿಯೇ ಉಳಿದಿತ್ತು.

ಆದರೆ ಇಂದು ನಮ್ಮ ಪತ್ರಿಕೆಯ ಖ್ಯಾತ ತನಿಖಾ ವರದಿಗಾರ ಶ್ರೀನಿಧಿ ಹಂದೆಯವರು, ತಮ್ಮ ಸಚಿತ್ರ ವರದಿಯ ಮೂಲಕ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.  ಮುಂದೆ ಓದಿ »

"ಎಂಜಲೆಲೆಯಲ್ಲಿ ಆರೋಗ್ಯಕರ ಆಹಾರ ಇರಲಿ" - ಮನೇಕಾ


ನವದೆಹಲಿ, ಮಾರ್ಚ್ ೧೭: ಊಟದ ನಂತರ ಎಂಜಲೆಲೆಗಳ ಜೊತೆಗೆ ಕೊಬ್ಬಿನಂಶ ತುಂಬಿದ ಆನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಜನರು ಬೀದಿಗೆ ಬಿಸಾಡುತ್ತಿರುವ ಬಗೆಗೆ ಮಾಜಿ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತ ಪಡಿಸಿದ್ದಾರೆ.  ಮುಂದೆ ಓದಿ »

ಹೇಮಮಾಲಿನಿ ಕೆನ್ನೆಯಿಂದ ಸರ್ಕಾರಕ್ಕೆ ಪೇಚು!

 ಮುಂದೆ ಓದಿ »

ನವದೆಹಲಿ, ಸೆ. ೧೩: ಖ್ಯಾತ ಚಿತ್ರತಾರೆ ಮತ್ತು ಸಂಸದೀಯ ನೃತ್ಯ ಪಟು ಹೇಮ ಮಾಲಿನಿಯವರ ಕೆನ್ನೆಗಳು ಕೇಂದ್ರ ಸರ್ಕಾರಕ್ಕೆ ಪೇಚುಂಟು ಮಾಡಿರುವ ಸಂಗತಿ ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿರುವ ಎಲ್. ಅಂಡ್ ಟಿ. ಸಂಸ್ಥೆ ಹೇಮ ಮಾಲಿನಿಯವರ ಕೆನ್ನೆಗಳನ್ನು ಸವರಿ ಪರೀಕ್ಷಿಸಲು ಬೇಡಿದ್ದ ಅನುಮತಿಯನ್ನು ಆಕೆ ನಿರಾಕರಿಸಿರುವುದು ಸರ್ಕಾರವನ್ನು ಪೇಚಿಗೆ ಸಿಕ್ಕಿಸಿದೆ. ಕೇಂದ್ರ ಕಾಮಗಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಎಲ್. ಅಂಡ್ ಟಿ.ಗೆ ನೀಡಿದ್ದ ಕರಾರು ಪತ್ರದಲ್ಲಿ, ರಸ್ತೆಯ ಗುಣ ಮಟ್ಟದ ಮಾಪನಕ್ಕಾಗಿ ಹೇಮ ಮಾಲಿನಿಯವರ ಕೆನ್ನೆಗಳನ್ನು ಪ್ರಸ್ತಾಪಿಸಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಷೇವ್ ಮಾಡಿದ ಮಂಗಗಳ ಮಾರಾಟ

ನಕಲಿ-ಶಿಶು ಮಾರಾಟಗಾರರ ಬಂಧನ
ಮುಂಬೈ, ಸೆ. ೪: ಕಾಳಸಂತೆಯಲ್ಲಿ ನಕಲಿ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಮುಂಬೈ ಪೋಲಿಸರು ಭೇಧಿಸಿದ್ದು, ಇಬ್ಬರು ಮಹಿಳೆಯರೂ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

   ಮುಂದೆ ಓದಿ »

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೃತೀಯ ರಾಷ್ಟ್ರಗಳ ಮಕ್ಕಳಿಗೆ ಅಪಾರ ಬೇಡಿಕೆ ಇದ್ದು, ಪ್ರಖ್ಯಾತ ಹಾಲಿವುಡ್ ತಾರೆಯರೂ ಸೇರಿದಂತೆ ಪಾಶ್ಚಾತ್ಯ ದೇಶಗಳ ಹಲವಾರು ಸಿರಿವಂತರು ಬಡ ದೇಶಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಈ ಬೇಡಿಕೆಯಿಂದಾಗಿ ಮಕ್ಕಳ ಕಾಳಸಂತೆಯಲ್ಲಿ, ನಕಲಿ-ಶಿಶುಗಳನ್ನು ಮಾರಾಟಮಾಡುವ ತಂಡಗಳು ಸಹ ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.

'ಜನಸಂಖ್ಯಾ ಸ್ಫೋಟಕ್ಕೆ ಪುನರ್ಜನ್ಮವೇ ಕಾರಣ'

ಕೊಲ್ಕತಾ, ಆಗಸ್ಟ್ ೨೧: ಭಾರತದಲ್ಲಿನ ಜನಸಂಖ್ಯಾ ಸಮಸ್ಯೆಗೆ ಪುನರ್ಜನ್ಮವೇ ಕಾರಣ ಎಂದು ಸಿ.ಪಿ.ಎಂ. ನಾಯಕಿ ಬೃಂದಾ ಕಾರಟ್ ವಿಶ್ಲೇಷಿಸಿದ್ದಾರೆ.

ಕೋಲ್ಕೊತಾದಲ್ಲಿ ನಡೆಯುತ್ತಿರುವ ಪುನರ್ಜನ್ಮ: ಒಂದು ಸಾಮಾಜಿಕ ಸಮಸ್ಯೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಅವರು, "ಪುನರ್ಜನ್ಮ ಪೀಡಿತ ರಾಷ್ಟ್ರಗಳಾದ ಭಾರತ, ಚೈನಾಗಳಲ್ಲೇ ಜನಸಂಖ್ಯಾ ಸಮಸ್ಯೆ ತಲೆದೋರಿರುವುದು ಕೇವಲ ಕಾಕತಾಳೀಯವಲ್ಲ. ಪುನರ್ಜನ್ಮರಹಿತ ರಾಷ್ಟ್ರಗಳಲ್ಲಿ ಒಮ್ಮೆ ಸತ್ತವರು ಮರು ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಪ್ರಥಮ ಜನ್ಮಿಗಳೊಡನೆ, ಪುನರ್ಜನ್ಮಿಗಳೂ ಪದೇ ಪದೇ ಹುಟ್ಟುತ್ತಿರುವುದರಿಂದ ಭಾರತದಲ್ಲಿ ಈ ಸಮಸ್ಯೆ ಎದುರಾಗಿದೆ. ಪುನರ್ಜನ್ಮವನ್ನು ಸರ್ಕಾರ ತಕ್ಷಣವೇ ನಿಷೇಧಿಸಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸಹ ಸೋವಿಯತ್ ರಷ್ಯಾದಂತೆ ಪ್ರಗತಿ ಪರ ದೇಶವಾಗುವುದರಲ್ಲಿ ಸಂದೇಹವಿಲ್ಲ." ಎಂದಿದ್ದಾರೆ.  ಮುಂದೆ ಓದಿ »