Sign up | Login | Font Help

ಸಾಹಿತ್ಯ/ಸಿನೆಮಾ/ಕಲೆ

ಸಾಹಿತ್ಯ/ಸಿನೆಮಾ/ಕಲೆ


ಚಿತ್ರ ವಿಮರ್ಶೆ: ದ ವಿನಿಂಗ್ ಕ್ಯಾಂಡಿಡೇಟ್!

ದ ವಿನಿಂಗ್ ಕ್ಯಾಂಡಿಡೇಟ್!

ಮಧ್ಯಾಹ್ನವೋ.. ರಾತ್ರಿಯೋ... ಅಂತೂ ಊಟದ ಸಮಯ. ಬೆಂಗಳೂರು ನಗರ. ಕನ್ನಡಿಗರ ಊರು. ಕರ್ನಾಟಕದ ರಾಜಧಾನಿ. ಮಲ್ಲೇಶ್ವರ ಆದರೂ ಸರಿ, ಜಯನಗರ ನಾಲ್ಕನೆಯ ಬ್ಲಾಕ್ ಆದರೂ ಸರಿ. ಯಾವುದೇ ಸೌತ್ ಇಂಡಿಯನ್ ರೆಸ್ಟಾರಂಟ್ ಆದರೂ ಪರವಾಗಿಲ್ಲ. ನಿಮಗೆ ಇಡ್ಲಿ ಅಥವಾ ದೋಸೆ ಬೇಕಿದ್ದರೆ, ದಯವಿಟ್ಟು ಕ್ಷಮಿಸಿ, ಅವುಗಳ ಟೈಮ್ ಮುಗಿದಿದೆ. ಆದರೆ, ಗೋಬಿ ಮಂಚೂರಿ? ಡ್ರೈ ಬೇಕೋ?! ಗ್ರೇವಿಯಲ್ಲಿ ಬೇಕೋ?!!  ಮುಂದೆ ಓದಿ »

ಮಜಾವಾಣಿ: ಜನ ವಾಣಿ

[ಕೊಟ್ಟ ಮಾತಿಗೆ ತಪ್ಪುವುದರ ವಿರುದ್ಧ ಸುದ್ದಿ ಮಾಧ್ಯಮಗಳು ಮಲತಾಯಿ ಧೋರಣೆ ತಳೆದಿರುವುದು ಮೇಲ್ನೋಟಕ್ಕೇ ಗೋಚರಿಸುವ ಅಸಹ್ಯ ಸತ್ಯ. ನಮ್ಮ ರಾಜ್ಯದ ರಾಜಕೀಯ ಸಂದರ್ಭದಲ್ಲಿ ಇದೊಂದು ಸಂಕ್ರಮಣ ಕಾಲ; ನಮ್ಮ ಅಸ್ಮಿತೆಯ ಅಸ್ತಿತ್ವದ ಬೇರುಗಳನ್ನೇ ಹುಡುಕ ಬೇಕಾದ ಅನಿವಾರ್ಯತೆ ಉಂಟಾಗಿರುವ ಕಾಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ನೈತಿಕ ಮೌಲ್ಯದ ಪರ ವಹಿಸದೆ ಜನಾಭಿಪ್ರಾಯವನ್ನು ನಿಷ್ಪಕ್ಷಪಾತದಿಂದ ಬಿಂಬಿಸುವ ಪತ್ರಿಕೆಯೆಂದರೆ ಮಜಾವಾಣಿ ಒಂದೇ. - ಸಂ.

ವಿ.ಸೂ.: ಅವಧಿ, ಇಸ್ಮಾಯಿಲ್, ಜೋಗಿ ಮನೆ, ಅ.ರಶೀದರ ಗಮನಕ್ಕೆ. "ಸಂಕ್ರಮಣ", "ಅಸ್ಮಿತೆ" ಇವು ನಿಮಗಾಗಿಯೇ ಬಳಸಿರುವ ಪದಗಳು. ಮುಂದಿನ ಬಾರಿ "ಅವಿನಾಭಾವ"ವನ್ನೂ ಬಳಸುತ್ತೇವೆ. ಪ್ರಾಮಿಸ್. ಅರ್ಥ ತಿಳಿಯದಿದ್ದರೂ ಈ ಪದಗಳನ್ನು ಬಳಸಿ ನಿಮ್ಮ ಗಮನ ಸೆಳೆಯುವ ನಮ್ಮ ಈ ಪ್ರಯತ್ನವನ್ನು ಆರ್ತನಾದವೆಂದೇ ತಿಳಿಯಬೇಕೆಂದು ಕೋರುತ್ತೇವೆ.]  ಮುಂದೆ ಓದಿ »

ಮಜಾವಾಣಿ: ಪುಸ್ತಕ ಪರಿಚಯ

ಇತ್ತೀಚೆಗೆ ಬಿಡುಗಡೆಯಾದ ಎರಡು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ಎರಡೂ ಪುಸ್ತಕಗಳು ಕಿರಿಯರಿಗಾಗಿಯೇ ಬರೆದಂತಹವು.  ಮುಂದೆ ಓದಿ »

ಮಜಾವಾಣಿ ಪುಸ್ತಕ ವಿಮರ್ಶೆ : ಆಭರಣ - ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ

ಆಭರಣ: ಇಷ್ಟಪಟ್ಟವರಿಗೆ ಮಾತ್ರ ಇಷ್ಟವಾಗುವ ಕಾದಂಬರಿ

[ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ನೂತನ ಕಾದಂಬರಿ ವಿವಾದಾಸ್ಪದ ಕೃತಿಯಾಗಿದ್ದು ಕರ್ನಾಟಕದಾದ್ಯಂತ ಅತೀವ ಚರ್ಚೆಗೆ ಕಾರಣವಾಗಿದೆ. ಬಲ ಪಂಥೀಯರು ಈ ಕಾದಂಬರಿಯನ್ನು ಮೆಚ್ಚಿ ಕೊಂಡಾಡುತ್ತಿದ್ದರೆ, ಎಡ ಪಂಥೀಯರು ಮೆಚ್ಚದೆ ಕೆಂಡವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವಿವಾದಾಸ್ಪದ ಕೃತಿಯ ಸಾಹಿತ್ಯಕ ಮೌಲ್ಯವನ್ನು ವಸ್ತುನಿಷ್ಠವಾಗಿ ಮತ್ತು ವೈಜ್ಞಾನಿಕವಾಗಿ ತುಲನೆ ಮಾಡುವುದು ಮಜಾವಾಣಿಯಂತಹ ದ್ವಿಪಂಥೀಯ ಪತ್ರಿಕೆಗೆ ಮಾತ್ರ ಸಾಧ್ಯ. ಸಾಧ್ಯತೆಯೊಂದಿಗೇ ಬರುವ ಗುರುತರವಾದ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಪತ್ರಿಕೆ, ಭೈರಪ್ಪನವರ ಈ ಪುಸ್ತಕವನ್ನು ವಿಮರ್ಶಿಸುವ ಹೊಣೆಯನ್ನು ಗೋಪಾಲ ಕೃಷ್ಣ ಅವರ ವಿಶಾಲವಾದ ಹಣೆಗೆ ಬರೆಯಿತು.

ಮಜಾವಾಣಿ ಓದುಗರಿಗೆ ಪರಿಚಯವಿರುವಂತೆ, ಗೋಪಾಲ ಕೃಷ್ಣ ನಮ್ಮ ಪತ್ರಿಕೆಯ ವೈಜ್ಞಾನಿಕ ವರದಿಗಾರರು ಮತ್ತು ಕಳೆದ ಬಾರಿಯ ಮಜಾವಾಣಿ ವೈಜ್ಞಾನಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಪ್ರಥಮ ಬಹುಮಾನ ಪಡೆದಂತವರು. - ಸಂಪಾದಕ]

ಎಸ್.ಎಲ್.ಭೈರಪ್ಪನವರ ಹೊಸ ಪುಸ್ತಕದ ಹೆಸರಿನಲ್ಲಿಯೇ ತಪ್ಪಿದೆ. ಪುಸ್ತಕದ ಹೆಸರು "ಆಭರಣ" ಎಂದಿರ ಬೇಕಾದದ್ದು "ಆವರಣ" ಎಂದು ಮುದ್ರಿತವಾಗಿದೆ. ಈ ಪುಸ್ತಕ ಹಲವಾರು ಆವೃತ್ತಿಗಳನ್ನು ಈಗಾಗಲೇ ಕಂಡಿದೆ. ಆದರೂ ಈ ಮುದ್ರಣ ದೋಷವನ್ನು ಲೇಖಕರಾಗಲಿ, ಪ್ರಕಾಶಕರಾಗಲಿ, ಮುದ್ರಕರಾಗಲಿ ಕಡೆಗೆ ಓದುಗರಾಗಲಿ ಗಮನಿಸಿಯೇ ಇಲ್ಲ. ಕನ್ನಡ ಸಾಹಿತ್ಯ ಈ ಮಟ್ಟಕ್ಕೆ ಇಳಿದಿರುವುದು ಖಂಡಿತಾ ಖಂಡನೀಯ.

ಈ ಪುಸ್ತಕದ ಕುರಿತು ಮಾತನಾಡುತ್ತಾ ಯು.ಆರ್.ಅನಂತ ಮೂರ್ತಿ "ಭೈರಪ್ಪ ಒಬ್ಬ ಡಿಬೇಟರ್" ಎಂದಿದ್ದಾರೆ. ಅದು ನಿಜ. ಮುದ್ರಣ ದೋಷದಿಂದ "ಆಭರಣ" "ಆವರಣ" ಆಗಿದೆ ಎಂದು ಒಪ್ಪಿಕೊಂಡು ತಿದ್ದುವ ಬದಲು, "ಆವರಣ"ವೇ ಸರಿಯೆಂದು ಭೈರಪ್ಪ ವಾದಿಸುತ್ತಾರೆ. ಅದಕ್ಕೋಸ್ಕ್ರರ ತೆಲುಗು ಚಿತ್ರ ನಾಯಕ ನಾಗಾರ್ಜುನ ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಾರೆ. (ಪುಟ vii ಮತ್ತು viii) ಇದು ತುಂಬಾ ತಪ್ಪು. ಎಲ್ಲರ ಪುಸ್ತಕದಲ್ಲೂ ಮುದ್ರಣ ದೋಷ ಇರುತ್ತದೆ. ಅದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಲೇಖಕರಿಗೆ ಇರಬೇಕು. ತಿದ್ದುಪುಡಿ ಪ್ರಕಟಿಸುವುದನ್ನು ಬಿಟ್ಟು ತಪ್ಪನ್ನು ಸಮರ್ಥಿಸಿಕೊಳ್ಳಲು ತೆಲುಗು ಫಿಲಂ ಸ್ಟಾರ್ ಹೆಸರು ಹೇಳುವುದು ಸರಿಯಲ್ಲ.  ಮುಂದೆ ಓದಿ »

ಮಜಾವಾಣಿ: ಸಾಹಿತ್ಯ - ಮನರಂಜನೆ

ಸಾಹಿತಿಗಳ ವಿವಾದಕ್ಕೆ ಸಬ್ಸಿಡಿ ಇಲ್ಲ - ಸಿ.ಎಂ.

ಬೆಂಗಳೂರು, ಜೂನ್ ೨೦: ನಿನ್ನೆಯಷ್ಟೇ ಸಾಹಿತಿಗಳ ಮೇಲೆ ಮನರಂಜನಾ ತೆರಿಗೆ ಇಲ್ಲ ಎಂದಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಇಂದು ಸಾಹಿತಿಗಳ ವಿವಾದಕ್ಕೆ ಸರ್ಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.  ಮುಂದೆ ಓದಿ »