Sign up | Login | Font Help

ಚಿಂತನ-ಮಂಥನ

ಚಿಂತನ-ಮಂಥನ


ಆಸೆಯೇ ದುಃಖಕ್ಕೆ ಕಾರಣ

ಆಸೆಯೇ ದುಃಖಕ್ಕೆ ಕಾರಣ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಮೊನ್ನೆ ರಸ್ತೆಯಲ್ಲಿ ಪುಟ್ಟ ಹುಡುಗನೊಬ್ಬ ಐಸ್ ಕ್ರೀಮ್ ತಿನ್ನುತ್ತಾ ನಡೆಯುತ್ತಿದ್ದ. ಅದನ್ನು ನೋಡಿ ನನಗೂ ಐಸ್ ಕ್ರೀಮ್ ತಿನ್ನಲು ಆಸೆಯಾಯಿತು. ಆ ಹುಡುಗನಿಂದ ಐಸ್ ಕ್ರೀಮ್ ಕಿತ್ತುಕೊಂಡೆ. ಅವನು ಬಿಕ್ಕಳಿಸಿ ಅಳುತ್ತಾ ತನ್ನ ಮನೆಯ ಕಡೆಗೆ ಓಡಿದ.  ಮುಂದೆ ಓದಿ »

ಮೂರ್ಖತನ

ಸೈಕಲ್ಲುಗಳಿಗೂ ಮನುಷ್ಯನಂತೆಯೇ ಜೀವ ಇದ್ದು, "ನನ್ನನ್ನು ಒದೆಯ ಬೇಡ" ಎಂದು ಅವು ದೈನ್ಯತೆಯಿಂದ ಪ್ರತಿ ದಿನ ಕೇಳಿ ಕೊಂಡಿದ್ದರೆ, "ಒದೆಯುವುದಕ್ಕೂ" "ತುಳಿಯುವುದಕ್ಕೂ" ನಡುವಿನ ಅಂತರ ತಿಳಿಯದ ಆ ಮೂರ್ಖ ಸೈಕಲ್ಲುಗಳಿಗೆ ಜೀವವಿಲ್ಲದಿರುವುದೇ ವಾಸಿ ಎನಿಸುತ್ತದೆ.  ಮುಂದೆ ಓದಿ »

ಆಶ್ಚರ್ಯ

ಪಕ್ಷಾಂತರ ಮಾಡಿದ ಶಾಸಕರೊಬ್ಬರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ, ಬೈ ಮಿಸ್ಟೇಕ್, ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಯೆಡ್ಯೂರಪ್ಪನವರಿಗೆ ಆಶ್ಚರ್ಯವಾಗುವುದು ಸಹಜ.  ಮುಂದೆ ಓದಿ »

ಪ್ರಶ್ನೆ

ಕೆಲವೊಮ್ಮೆ ನಿಮ್ಮ ಸಣ್ಣ ಮಗು ಸಹ ಉತ್ತಮ ಪ್ರಶ್ನೆ ಕೇಳುತ್ತದೆ.
ಅಂತಹ ಸಂದರ್ಭದಲ್ಲಿ ಈ ಮಗು ಖಂಡಿತಾ ನಿಮ್ಮದೇ ಎಂದು ನೀವೇ ಪ್ರಶ್ನಿಸಿಕೊಳ್ಳುವುದು ಒಳ್ಳೆಯದು.

ಕನಿಕರ



ಗುಪ್ತರ ಕಾಲವನ್ನು "ಸುವರ್ಣಯುಗ" ಎನ್ನುತ್ತಾರೆ ಎಂದು ಕೇಳಿದಾಗಲೆಲ್ಲಾ ನನಗೆ ಮೌರ್ಯರ ಬಗೆಗೆ ಕನಿಕರವೆನ್ನಿಸುತ್ತದೆ.  ಮುಂದೆ ಓದಿ »