ಅಗ್ರ ರಾಷ್ಟ್ರೀಯ ಸುದ್ದಿ
ಅಗ್ರ ರಾಷ್ಟ್ರೀಯ ಸುದ್ದಿ
ಇಸ್ರೋ ಜೊತೆ ಶಬಾನ ಒಪ್ಪಂದ
ಶಬಾನ ಹುಬ್ಬು ಅಂತರಿಕ್ಷಕ್ಕೆ
ಬೆಂಗಳೂರು ನ.೩೧: ಬಾಲಿವುಡ್ಡಿನ
ಪ್ರಖ್ಯಾತ ತಾರೆ ಶಬಾನ ಅಜ್ಮಿಯವರು ಇಂದು ಇಸ್ರೋ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ
ಸಹಿ ಹಾಕಿದರು. ಆ ಒಪ್ಪಂದದ ಪ್ರಕಾರ ಶಬಾನರವರ ಹುಬ್ಬುಗಳನ್ನು ಅಂತರಿಕ್ಷಕ್ಕೇರಿಸುವ
ಹೊಣೆ ಇಸ್ರೋ ಪಾಲಿಗೆ ಒದಗಿದೆ. ಮುಂದೆ ಓದಿ »
ಹಗ್ಗಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆ
ನವ ದೆಹಲಿ, ಸೆಪ್ಟೆಂಬರ್ ೩೧: ಹಗ್ಗಗಳ ಅಕ್ರಮ ಬಳಕೆಯಿಂದ ಕೇಂದ್ರ ಸರ್ಕಾರ ರೋಸಿ ಹೋಗಿದ್ದು, ಈ ಅಕ್ರಮ ಬಳಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಮುಂದೆ ಓದಿ »
ಇನ್ನು ಮುಂದೆ ಅಣು "ಮುಂಬ್"?!
ಮುಂಬೈ, ಏಪ್ರಿಲ್ ೩೧: ಬಾಂಬೆ ಡೈಯಿಂಗ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೇರಿಸಿ, "ಬಾಂಬೆ" ಎಂದು ಹೆಸರಿರುವ ಪ್ರತಿಯೊಂದು ಸಂಘ ಸಂಸ್ಥೆಯೂ ಅದನ್ನು "ಮುಂಬೈ"ಗೆ ಬದಲಿಸ ಬೇಕೆಂದು ಶಿವಸೇನಾ ಮುಖ್ಯಸ್ತ ಬಾಳ್ ಠಾಕ್ರೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಣು ಬಾಂಬನ್ನು ಅಣು "ಮುಂಬ್" ಎಂದು ಕರೆಯುವಂತೆ ಕೂಗೆದ್ದಿದೆ. ಮುಂದೆ ಓದಿ »
ಮದ್ರಾಸಿನಲ್ಲಿ ಮೈಸೂರು ಪಾಕಿಗೆ ಬಹಿಷ್ಕಾರ!
ಚನ್ನೈ, ಏಪ್ರಿಲ್ ೩೧: ಕಾವೇರಿ ಜಲ ವಿವಾದ ಇತ್ಯರ್ಥವಾಗುವವರೆಗೂ, ತಮಿಳು ನಾಡಿನಲ್ಲಿ ಮೈಸೂರು ಪಾಕ್ ಮಾರಾಟ ಮತ್ತು ಸೇವನೆಯನ್ನು ಬಹಿಷ್ಕರಿಸುವಂತೆ ತಮಿಳು ಪರ ಸಂಘಟನೆಗಳು ಕರೆ ನೀಡಿವೆ. ಮುಂದೆ ಓದಿ »