Sign up | Login | Font Help

ರಾಜ್ಯ ಸುದ್ದಿ

"ಅಷ್ಟೇನಾ?! ನಂಬಕ್ಕಾಗಲ್ಲ!!" - ಅನಿತಾ

Anitha Kumaraswamyಬೆಳಗಾವಿ ಜ.20:"ಅಷ್ಟೇನಾ?! ನಂಬಕ್ಕಾಗಲ್ಲ!!" ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅನಿತಾ ಕುಮಾರಸ್ವಾಮಿಯವರು ಉದ್ಗರಿಸಿದ ಮೊದಲ ಮಾತುಗಳು ಇವು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನ ಮಂಡಲದ ಕಾರ್ಯದರ್ಶಿಯಿಂದ ಶಾಸಕರ ಸಂಬಳ-ಸವಲತ್ತುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದ ಅನಿತಾ ಕುಮಾರಸ್ವಾಮಿಯವರು, ಶಾಸಕರ ಮಾಸಿಕ ಸಂಬಳ ಕೇವಲ ಕೆಲವೇ ಸಾವಿರ ರೂಪಾಯಿಗಳು ಎಂದು ತಿಳಿದಾಗ ಅವಕ್ಕಾದರು. ಉತ್ತಮವಾದ ಬಿಲ್‌ಗಳನ್ನು ಪಾಸ್ ಮಾಡಿದರೆ ಏನಾದರೂ ಬೋನಸ್ ಸಿಗುತ್ತದೆಯೇ ಎಂಬ ಅನಿತಾ ಅವರ ಪ್ರಶ್ನೆಗೆ ವಿಧಾನಮಂಡಲದ ಕಾರ್ಯದರ್ಶಿ ನಕಾರಾತ್ಮಕ ಉತ್ತರ ನೀಡಿದಾಗಲಂತೂ ಅನಿತಾರವರ ಮುಖದಲ್ಲಿ ಸಖೇದಾಶ್ಚರ್ಯ ಮನೆ ಮಾಡಿತ್ತು.  ಮುಂದೆ ಓದಿ »

ಸಾಹಿತ್ಯ/ಸಿನೆಮಾ/ಕಲೆ

ಮಜಾವಾಣಿ ಸಂದರ್ಶನ

Cough Artist Krishnappaಹಿನ್ನೆಲೆ ಕೆಮ್ಮು ಕಲಾವಿದ ದಮ್ಮುಲ ಕೃಷ್ಣಪ್ಪ
"ಕನ್ನಡ ಚಿತ್ರರಂಗ ಕೆಮ್ಮು ಪ್ರಧಾನವಾದ ಚಿತ್ರ ನಿರ್ಮಿಸಿಲ್ಲ!"

ನಿಮ್ಮ ಈ ವಿಶಿಷ್ಟ ಕಲೆಯ ಹಿನ್ನೆಲೆ ತಿಳಿಸಿ
ಕೆಮ್ಮು ಕಲೆ ಹೊಸದೇನಲ್ಲ. ಮನುಶ್ಯ ಮಾತನಾಡಲು ಕಲಿಯುವ ಮುನ್ನವೇ ಕೆಮ್ಮುತ್ತಿದ್ದ. ಶಿಶುರ್ವೇತ್ತಿ-ಪಶುರ್ವೇತ್ತಿ ಎನ್ನುವಂತೆ ಹಸುಳೆಗಳಿಂದ ಹಿಡಿದು ಪಶು-ಪ್ರಾಣಿಗಳವರೆಗೆ ಕೆಮ್ಮದವರು ಅಥವಾ ಕೆಮ್ಮಿಗೆ ಸ್ಪಂದಿಸದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ. ನನ್ನ ವೈಶಿಷ್ಟ್ಯವೇನೆಂದರೆ ನಾನು ಈ ಕೆಮ್ಮಲ್ಲಿ ಕೊಂಚ ಮಟ್ಟಿಗೆ ನೈಪುಣ್ಯವನ್ನು ಸಾಧಿಸಿದ್ದೇನೆ ಅಷ್ಟೇ.  ಮುಂದೆ ಓದಿ »

ಚಿಂತನ-ಮಂಥನ

ಆಸೆಯೇ ದುಃಖಕ್ಕೆ ಕಾರಣ

ಆಸೆಯೇ ದುಃಖಕ್ಕೆ ಕಾರಣ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಮೊನ್ನೆ ರಸ್ತೆಯಲ್ಲಿ ಪುಟ್ಟ ಹುಡುಗನೊಬ್ಬ ಐಸ್ ಕ್ರೀಮ್ ತಿನ್ನುತ್ತಾ ನಡೆಯುತ್ತಿದ್ದ. ಅದನ್ನು ನೋಡಿ ನನಗೂ ಐಸ್ ಕ್ರೀಮ್ ತಿನ್ನಲು ಆಸೆಯಾಯಿತು. ಆ ಹುಡುಗನಿಂದ ಐಸ್ ಕ್ರೀಮ್ ಕಿತ್ತುಕೊಂಡೆ. ಅವನು ಬಿಕ್ಕಳಿಸಿ ಅಳುತ್ತಾ ತನ್ನ ಮನೆಯ ಕಡೆಗೆ ಓಡಿದ.  ಮುಂದೆ ಓದಿ »

ಅಗ್ರ ರಾಷ್ಟ್ರೀಯ ಸುದ್ದಿ

"ವಿಷಯ ತಿಳಿದರೆ ಕೋಪಗೊಳ್ಳಲು ಸಿದ್ಧ" : ಸಮೀಕ್ಷೆ

Satyam Commenter Kiran Ganguly

ಹೈದರಾಬಾದ್ ಜ.16: ಸತ್ಯಂ ಹಗರಣದ ಬಗೆಗೆ ಮಜಾವಾಣಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದ ಶೇ.೬೮ ಮಂದಿ ಜನರು ಹಗರಣದ ವಿವರಗಳು 

ತಿಳಿದರೆ ತಾವು ಕೋಪಗೊಳ್ಳಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ.  ಮುಂದೆ ಓದಿ »

ವಾಣಿಜ್ಯ/ತಂತ್ರಜ್ಞಾನ

ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!

BNSL Ad

ಬೆಂಗಳೂರು, ಮಾ.20: ಬಿ.ಜೆ.ಪಿ., ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್. ಬಂಗಾರಪ್ಪನವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.  ಮುಂದೆ ಓದಿ »

ಸಂಪಾದಕೀಯ

"ಇಂಡಿಯನ್ಸ್ ನಂ. ೧" ಎನ್ನುವುದು ಶಿಕ್ಷಾರ್ಹ ಅಪರಾಧವೇ?!

ಅರೆ ನಗ್ನ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುತ್ತಾ "ಈಸ್ಟ್ ಆರ್ ವೆಸ್ಟ್, ಇಂಡಿಯಾ ಈಸ್ ದ ಬೆಸ್ಟ್" ಎಂದರೆ ತಪ್ಪಲ್ಲ; ತಪ್ಪಲ್ಲ ಮಾತ್ರವಲ್ಲಾ, ಅದು ಹೆಚ್ಚುಗಾರಿಕೆ; ಹಣದ ಹೊಳೆಯೇ ಹರಿಸುವ ಹೆಚ್ಚುಗಾರಿಕೆ. ಆದರೆ, ಹೈಸ್ಕೂಲಿನ ಹುಡುಗಿಯರು "Indians No. 1" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾತ್ರ ಶಿಕ್ಷಾರ್ಹ ಅಪರಾಧ!  ಮುಂದೆ ಓದಿ »